ಮೋಸ ಮಾಡಲು ಮನಸು ಇಲ್ಲ
ಮೋಸ ಹೋದಾಗ ಬರಡು ಎಲ್ಲ
ಮೋಸ ಎಂಬ ಎರಡಕ್ಷರ ಈ
ಜಗದಿ
ಮೋಸ ಮಾಡಲು ಹುಟ್ಟಿತಲ್ಲ......
ಮೋಸ ಮಾಡಿದವ ಪುಣ್ಯಾತ್ಮ
ಮೋಸ ಹೋದವ ಪಾಪಾತ್ಮ
ಮೋಸ ಮಾಡಿದವರನ್ನು ಕಾಯುತ್ತದೆ ಕಾಲ
ಮೋಸ ಹೋದವರನ್ನು ಕೈ ಬಿಡುತ್ತದೆ …….
ಮೋಸ ಇರದ ಮನವಿಲ್ಲ
ಮೋಸ ಹೋಗದ ಜನವಿಲ್ಲ
ಮೋಸ ಮಾಡಿದವ ಕೊನೆಗೆ ಪರಿತಪಿಸುವ
ಮೋಸ ಹೋದವ ಅವನ ನೋಡಿ ಮನದಲ್ಲೇ ನಗುವ .....