Friday, 11 May 2012

ಸರಾಹಿ ಸೀಸೆಯಲಿ ನನ್ನ ಪ್ರೇಮಿ ಕಾಣುವಳು!!

ಭಾವನೆಗಳ ಜೊತೆಗೂಡಿ
ಕೊನೆಗೆ ನೀ  ಬರುವೆನೆಂದು
ಹೇಳದೆ ನನ್ನ ಬರಿದು ಮಾಡಿ
ಮತ್ತೊಬ್ಬನ ಜೇಬು ಕಾಲಿ ಮಾಡಲು ಹೊರಟಿರುವೆಯ
ಚೆಲುವೆ !!...

ಅಯ್ಯೋ ಸಿಗಬಾರದೆ ಹುಡುಗನ ಕಾಂಟಾಕ್ಟ್
ಇವಳು ನನ್ನ ಚಲುವೆ ಎಂದು ಹೇಳಲು ಅಲ್ಲ
ನಿನ್ನ ಜೇಬನ್ನು ಬೇಗ ಕಾಲಿ ಮಾಡುವಳು ಎಂದು !!!

ಅಯ್ಯೋ ಹುಡುಗನಾಗಿ ಹುಟ್ಟಿದ್ದೇ ತಪ್ಪ
ಅತವ ಹುಡಿಗಿಯ ಕೈಗೆ ಸಿಕ್ಕಿದ್ದೇ ತಪ್ಪ
ತಪ್ಪು ಒಪ್ಪುಗಳ ನಡುವೆ ನಾನಾಗುವೆ
ಕಾಲಿ ಏಟಿಎಂ ಯಂತ್ರ
ಯಂತ್ರಕ್ಕಾದರೂ ತುಂಬುವರು ದುಡ್ಡು
ಆದರೆ ನನ್ನ ಹೊಟ್ಟೆಗೆ ತುಂಬುವುದು ಬಾಟಲಿಯ ಸರಾಹಿ

ಮತ್ತೆ ಅದೇ ಹುಡುಗಿ ಹೇಳುವಳು
ನೀ ಆದೆ ದೇವದಾಸ |
ಆದರೆ ನನ್ನ ಮನಸು ಅಳುವುದು ಹೀಗೆ
ಸರಾಹಿ ಸೀಸೆಯಲಿ ನನ್ನ ಪ್ರೇಮಿ ಕಾಣುವಳು |2|

Tuesday, 8 May 2012

ನಾ ಬರೆದ ಕವಿತೆಯ ಓದಲು ನೀ ಬರಬಾರದೆ

ನಾ ಬರೆದ ಕವಿತೆಯ ಓದಲು
ನೀ  ಬರಬಾರದೆ ...

ನೀನಿರದ ಕವನಗಳ ಸಾಲು
ಅಳುತಲಿವೆ ಆಸರೆ ಇಲ್ಲದೆ
ನೀ ಬರುವೆ ಎಂದು ಕಾದು
ನಾ ಕುಳಿತ ಕಲ್ಲೇ ಕರಗಿದೆ
ಕೊನೆವರೆಗೂ ಕಾಯುವೆ ನಿನ್ನ
ಬಂದು ಸೇರಿಬಿಡು ನನ್ನ..

ಮುಂಜಾನೆ ನಿನ್ನ ಎಬ್ಬಿಸಿ
ಬಿಡದ ಕಣ್ಣುಗಳ ತೆರೆಸಿ
ಇಂಪಾದ ಗಾಳಿಯ ಬೀಸಿ
ಮತ್ತೆ ಮಲಗಿಸುವೆ
ಮುದ್ದಾದ ನಿನ್ನ ಮೊಗವ
ನೋಡಿ ಒಮ್ಮೆ ...

ಹಿಂದೆಂದು  ನೋಡದ  ಸೊಗಸೆ
ನನ್ನ ಬಾಳಲಿ ಬಂದು ನೆಲಸೆ
ಕಾಯುತಲಿರುವ ನನ್ನ ಮನ
ಕಲ್ಲಾಗದಿರಲೆಂದು ಬೇಡುವೆ ನ
ಎಲ್ಲಿರುವೆ ನನ್ನೊಲವೆ ಬಳಿಗೆ ಬಾ
ನಾ ಬರೆದ ಕವಿತೆಯ ಓದಲು
ಬೇಗ ಬಾ ...