ಮನದ ಪರದೆಯ ಮೇಲೆ ತಂಗಾಳಿ
ತೇಲಿ ತೇಲಿ ಮುದವನು ನೀಡಲಿ ~ ~
ನಲ್ಲನು ಸನಿಹದಲಿ
ಮನವು ಹರುಷದಲಿ
ನಾಚಿದ ಮೊಗದಲಿ
ನಗುವಿನ ಕಾರಂಜಿ ತೇಲಿ ತೇಲಿ ~ ~
ಅಲೆಗಳ ಸ್ಪರ್ಶದಲಿ
ಕಳೆದುಹೋದೆ ನಾನೆಲ್ಲಿ
ತಿಳಿಸುವೆಯ ತಂಗಾಳಿ
ನಿನ್ನ ಮರು ಸ್ಪರ್ಶದಲಿ ~ ~
ಸೂರ್ಯನ ಹೊಂಗಿರನದಲಿ
ಮಿಂಚುತಿಹ ನೀರಲೆಗಳಲ್ಲಿ
ಮಿಂದು ಬಂದು ಕರಗಿಹೆನಿಲ್ಲಿ
ಮನದ ಪರದೆಯ ಮೇಲೆ ತಂಗಾಳಿ ತೇಲಿ ತೇಲಿ ~ ~