Thursday, 27 December 2012

ಕಣ್ಣು ಕಾಣದವರು

ಕಣ್ಣು ಕಾಣದವರು
ಮಾತು ಬಾರದವರು
ನಡೆಯಲು ಬರದವರು
ನಗಲು ವಿಷಯವಿಲ್ಲದವರು
ಮಾಡುವ ಕೆಲಸವಾದರೂ ಏನು ನಿಮಗೆ ಗೊತ್ತ ..?

ಕಣ್ಣು ಕಾಣದವರು ಚಂದುಳ್ಳಿ ಚಲುವ/ಚೆಲುವೆಯರನ್ನು ನೋಡಿ ಇವರೇಕೆ ಹೀಗಿದ್ದರೆ ಎನ್ನುವುದು ,
ಮಾತು ಬಾರದವರು ಚೆನ್ನಾಗಿ ಮಾತನಾಡುವವರನ್ನು ನೋಡಿ ತೋರಿಕೆಗೆ ಹೀಗಾಡುವರು ಎಂದೆನುವುದು,
ನಡೆಯಲು ಬರದವರು ಸುಂದರ ನಡುಗೆ ಉಳ್ಳವರನ್ನು ನೋಡಿ ಇವರಿಗೆ ನಡೆಯುವುದನ್ನು ಹೇಳಿ ಕೊಡಲ ಎಂದು ಮನದಲ್ಲೇ ಹೇಳಿ ನಗುವುದು ,
ನಗಲು ವಿಷಯವಿಲ್ಲದವರು ಮನಸ್ಪೂರ್ತಿ ನಕ್ಕು ನಲಿವ ಮನಗಳನ್ನು ಹಿಯಾಳಿಸಿ ನಗುವುದು ,
ಇದೆ ಇವರು ಮಾಡುವ ಕೆಲಸ ..

ಜನಕ್ಕೆ ಒಂದು ಕಿವಿ ಮಾತು
ನಿಮ್ಮನ್ನು ನೋಡಿ ನೀವೇ ಹಣಕಿಸುವ ಸಮಯ ಅತ್ತಿರವಿದೆ
ಯಾಕೆಂದರೆ ಜಗತ್ತು ಪ್ರತಿಬಿಂಬ ನೀವು ಮಾಡುವ ಪ್ರತಿಯೊಂದು ......!!! ನಿಮ್ಮಮ್ಮು ಬೆಂಬಿಡದ ಹಿಡಂಬಿಯಾಗಿ ಕಾಡುತ್ತವೆ

ಕಣ್ಣು ಕಾಣುವ
ಮಾತನಾಡುವ
ನಡೆಯಲು ಬರುವ
ನಗಲು ವಿಷಯವಿರುವ ಮನಗಲೇ ನೀವು ಸದಾ ಸುಖಿಯಾಗಿರುವಿರಿ :-)
 

Friday, 23 November 2012

ಒಪ್ಪಿಕೊ .......


















ಕನಸನ್ನು ಮುಚ್ಚಿಟ್ಟು
ಮೊಗದಲ್ಲಿ ಮುನಿಸಿಟ್ಟು
ಕಣ್ಣಲ್ಲಿ ಹನಿ ಇಟ್ಟು
ಅಲೆಯಂತಾಗಿದೆ ನಿನ್ನ ಮನಸು ...

ಜೋಡಿಸುವೆ ಜೋಪಾನವಾಗಿ
ಕಳೆದೋದ ನಿನ್ನ ಕನಸ
ಕೂಡಿಟ್ಟು ಕೊಂಡಿರುವೆ
ಒಂದೊಂದು ನೆನಪ್ಪನ್ನ ...

ನಿನ ಕನಸನ್ನು ಬಿಚ್ಚಿಟ್ಟು
ನಗುವನ್ನು ಮುಂದಿಟ್ಟು
ಕಣ್ಣಲ್ಲಿ ಮುತ್ತಿಟ್ಟು
ಕಾಯುವೆನು ನಿನ್ನ,
ನೋಯಿಸದೆ ಮನವನ್ನ
ಒಪ್ಪಿಬಿಡು ನನ್ನ .....


 

Wednesday, 29 August 2012

Sshhh !!!


The shortest lady walks into the darkest forest,

Met the oldest lion that had the sharpest eyes,

She fell on the flattest land, and all of a sudden started laughing,

Because it was only a dream!!


Story behind the poem: 5th std student had to write a poem as an assignment and it should have 5 words, they are: shortest, darkest, sharpest, oldest and flattest. I wrote a poem for her and she got the first prize!

Friday, 17 August 2012

ವೈಟ್ ಫೀಲ್ಡ್ ಪಯಣದ ಪ್ರಯಾಸ !!!!

ಜೀವನ ನರಕ
ಪಯಣಿಸಿದರೆ ಬಲುದೂರ.....

ಪಯಣ ಪ್ರಾಯಸವಾಗಿ ,
ತಲೆಯ ಮೇಲೆ ಬಾರವಾದ ಬಂಡೆ ಹೇರಿದಂತಾಗಿ,
ಕಣ್ಣಿಗೆ ಕೆಂಪು ಮೆಣಸಿನ ಪುಡಿ ಹೋದಂತಾಗಿ ,              
ಕಾಲುಗಳು ಥರ್ಮೋಕೊಲ್ ಅಂತೆ ಬೆಂಡಾಗಿ ||೨||


ಹೊಟ್ಟೆಯೊಳಗೆ ಹಸಿವು ತಕ ತೈ ನಾಟ್ಯವಾಡಿದಂತಾಗಿ,
ಇನ್ಕ್ರಿಮೆಂಟ್ ಡಬಲ್ ಆಗಿ ....
ಪ್ರೋಮೋಶನ್ ಸಿಕ್ಕರೂ ಬೇಡವಾಗಿದೆ,
ಕನಸಲ್ಲೂ ಬಯಸದಂತಾಗಿದೆ ಆ ವೈಟ್ ಫೀಲ್ಡ್ ಪಯಣ ......

Wednesday, 6 June 2012

ಮೋಸ

ಮೋಸ ಮಾಡಲು ಮನಸು ಇಲ್ಲ
ಮೋಸ ಹೋದಾಗ ಬರಡು ಎಲ್ಲ
ಮೋಸ ಎಂಬ ಎರಡಕ್ಷರ ಜಗದಿ
ಮೋಸ ಮಾಡಲು ಹುಟ್ಟಿತಲ್ಲ......

ಮೋಸ ಮಾಡಿದವ ಪುಣ್ಯಾತ್ಮ
ಮೋಸ ಹೋದವ ಪಾಪಾತ್ಮ
ಮೋಸ ಮಾಡಿದವರನ್ನು  ಕಾಯುತ್ತದೆ ಕಾಲ
ಮೋಸ ಹೋದವರನ್ನು  ಕೈ ಬಿಡುತ್ತದೆ …….


ಮೋಸ ಇರದ  ಮನವಿಲ್ಲ
ಮೋಸ ಹೋಗದ  ಜನವಿಲ್ಲ
ಮೋಸ ಮಾಡಿದವ ಕೊನೆಗೆ ಪರಿತಪಿಸುವ
ಮೋಸ ಹೋದವ  ಅವನ ನೋಡಿ ಮನದಲ್ಲೇ ನಗುವ .....

Friday, 11 May 2012

ಸರಾಹಿ ಸೀಸೆಯಲಿ ನನ್ನ ಪ್ರೇಮಿ ಕಾಣುವಳು!!

ಭಾವನೆಗಳ ಜೊತೆಗೂಡಿ
ಕೊನೆಗೆ ನೀ  ಬರುವೆನೆಂದು
ಹೇಳದೆ ನನ್ನ ಬರಿದು ಮಾಡಿ
ಮತ್ತೊಬ್ಬನ ಜೇಬು ಕಾಲಿ ಮಾಡಲು ಹೊರಟಿರುವೆಯ
ಚೆಲುವೆ !!...

ಅಯ್ಯೋ ಸಿಗಬಾರದೆ ಹುಡುಗನ ಕಾಂಟಾಕ್ಟ್
ಇವಳು ನನ್ನ ಚಲುವೆ ಎಂದು ಹೇಳಲು ಅಲ್ಲ
ನಿನ್ನ ಜೇಬನ್ನು ಬೇಗ ಕಾಲಿ ಮಾಡುವಳು ಎಂದು !!!

ಅಯ್ಯೋ ಹುಡುಗನಾಗಿ ಹುಟ್ಟಿದ್ದೇ ತಪ್ಪ
ಅತವ ಹುಡಿಗಿಯ ಕೈಗೆ ಸಿಕ್ಕಿದ್ದೇ ತಪ್ಪ
ತಪ್ಪು ಒಪ್ಪುಗಳ ನಡುವೆ ನಾನಾಗುವೆ
ಕಾಲಿ ಏಟಿಎಂ ಯಂತ್ರ
ಯಂತ್ರಕ್ಕಾದರೂ ತುಂಬುವರು ದುಡ್ಡು
ಆದರೆ ನನ್ನ ಹೊಟ್ಟೆಗೆ ತುಂಬುವುದು ಬಾಟಲಿಯ ಸರಾಹಿ

ಮತ್ತೆ ಅದೇ ಹುಡುಗಿ ಹೇಳುವಳು
ನೀ ಆದೆ ದೇವದಾಸ |
ಆದರೆ ನನ್ನ ಮನಸು ಅಳುವುದು ಹೀಗೆ
ಸರಾಹಿ ಸೀಸೆಯಲಿ ನನ್ನ ಪ್ರೇಮಿ ಕಾಣುವಳು |2|

Tuesday, 8 May 2012

ನಾ ಬರೆದ ಕವಿತೆಯ ಓದಲು ನೀ ಬರಬಾರದೆ

ನಾ ಬರೆದ ಕವಿತೆಯ ಓದಲು
ನೀ  ಬರಬಾರದೆ ...

ನೀನಿರದ ಕವನಗಳ ಸಾಲು
ಅಳುತಲಿವೆ ಆಸರೆ ಇಲ್ಲದೆ
ನೀ ಬರುವೆ ಎಂದು ಕಾದು
ನಾ ಕುಳಿತ ಕಲ್ಲೇ ಕರಗಿದೆ
ಕೊನೆವರೆಗೂ ಕಾಯುವೆ ನಿನ್ನ
ಬಂದು ಸೇರಿಬಿಡು ನನ್ನ..

ಮುಂಜಾನೆ ನಿನ್ನ ಎಬ್ಬಿಸಿ
ಬಿಡದ ಕಣ್ಣುಗಳ ತೆರೆಸಿ
ಇಂಪಾದ ಗಾಳಿಯ ಬೀಸಿ
ಮತ್ತೆ ಮಲಗಿಸುವೆ
ಮುದ್ದಾದ ನಿನ್ನ ಮೊಗವ
ನೋಡಿ ಒಮ್ಮೆ ...

ಹಿಂದೆಂದು  ನೋಡದ  ಸೊಗಸೆ
ನನ್ನ ಬಾಳಲಿ ಬಂದು ನೆಲಸೆ
ಕಾಯುತಲಿರುವ ನನ್ನ ಮನ
ಕಲ್ಲಾಗದಿರಲೆಂದು ಬೇಡುವೆ ನ
ಎಲ್ಲಿರುವೆ ನನ್ನೊಲವೆ ಬಳಿಗೆ ಬಾ
ನಾ ಬರೆದ ಕವಿತೆಯ ಓದಲು
ಬೇಗ ಬಾ ...

Monday, 19 March 2012

ಗಳು ಗಳು ಬರಿ ಪ್ರಾಜೆಕ್ಟ್ ಗಳು !!

ಆಫೀಸ್ನಲ್ಲಿ ಕುಳಿತು ಬೋರ್ ಒಡೆಯುತ್ತಿತ್ತು
ಫ್ರೆಷೆರ್ಸ್ ಸೇರಿದರು ನಮ್ಮ ಟೀಮು !!

ಕಾಲ ಕಳೆಯಲು ಹಲವು ದಾರಿಗಳು~!~
ಜೀವನ ಬರಿ ಮೋಜಿನಲು 
ಸಾಗುತಿದೆ ಸರಾಗದೊಳು  ...~~

ಬೇಡವಾಗಿದೆ ಪ್ರಾಜೆಕ್ಟ್ನ ಗೋ-ಲೈವ್ ಡೇಟುಗಳು  !!ಸಮಯ ಈಗೆ ಇರಲೆನ್ನುವುದು ಮನದ ಅಳಲು
ಮಜವಾಗಿತ್ತು ದಿನಗಳು~~
ಆದರೆ ಮ್ಯಾನೇಜರ್  ಕರೆದು ಕೊಟ್ಟರು ಹೊಸ  ಪ್ರಾಜೆಕ್ಟುಗಳು
ಮತ್ತೆ ಸುರು  ಆಯಿತು  ಪ್ರಾಜೆಕ್ಟ್  ಡೆಡ್ ಲೈನುಗಳು !! !!

Friday, 24 February 2012

ತಂಗಾಳಿ~~~

ಮನದ ಪರದೆಯ ಮೇಲೆ ತಂಗಾಳಿ
ತೇಲಿ ತೇಲಿ ಮುದವನು ನೀಡಲಿ ~ ~

ನಲ್ಲನು ಸನಿಹದಲಿ
ಮನವು ಹರುಷದಲಿ 
ನಾಚಿದ ಮೊಗದಲಿ
ನಗುವಿನ ಕಾರಂಜಿ ತೇಲಿ ತೇಲಿ ~ ~

ಅಲೆಗಳ ಸ್ಪರ್ಶದಲಿ
ಕಳೆದುಹೋದೆ ನಾನೆಲ್ಲಿ
ತಿಳಿಸುವೆಯ ತಂಗಾಳಿ
ನಿನ್ನ  ಮರು ಸ್ಪರ್ಶದಲಿ ~ ~

ಸೂರ್ಯನ ಹೊಂಗಿರನದಲಿ
ಮಿಂಚುತಿಹ ನೀರಲೆಗಳಲ್ಲಿ
ಮಿಂದು ಬಂದು ಕರಗಿಹೆನಿಲ್ಲಿ
ಮನದ ಪರದೆಯ ಮೇಲೆ ತಂಗಾಳಿ ತೇಲಿ ತೇಲಿ ~ ~


Monday, 2 January 2012

ಹಿಂದೆ ನಿಂತು ಮಾತನಾಡುವವರು

ಹಿಂದೆ  ನಿಂತು  ಮಾತನಾಡುವ  ಮಂಗಗಳು
ಮುಂದಕ್ಕೆ  ಬಂದಾಗ  ನಟಿಸುವವು ,
ಹಿಂದೆ  ಆಡಿದ  ಮಾತು  
ಮರೆತು ಹೋಯ್ತು  ….
ಮುಂದೆ  ಬಂದಾಗ  ಅವರಿಂದೆ  ಇರುವವರು
ಆಡುವ   ಪಿಸುಮಾತ  ಅರಿಯದವರು ,
ನಟಿಸುವ  ಮಂಗಗಳು  ಈ  ಜಗದಲಿರೋ  ಮಂಕು  ತಿಮ್ಮಗಳು ….

Sunday, 1 January 2012

ನನ್ನ ಕನಸು


ನನ್ನ ಕನಸೊಂದಿದೆ,
ಅದರಲ್ಲಿ ನಾನಾಗಬೇಕು ಪುಟ್ಟ ಕೂಸು ......
ಇಹ ಲೋಕದ ಪರಿವಿಲ್ಲದೆ 
ನನ್ನದೇ ಒಂದು ಸುಂದರ ಲೋಕ ಕಟ್ಟಬೇಕು :-)