Tuesday, 8 May 2012

ನಾ ಬರೆದ ಕವಿತೆಯ ಓದಲು ನೀ ಬರಬಾರದೆ

ನಾ ಬರೆದ ಕವಿತೆಯ ಓದಲು
ನೀ  ಬರಬಾರದೆ ...

ನೀನಿರದ ಕವನಗಳ ಸಾಲು
ಅಳುತಲಿವೆ ಆಸರೆ ಇಲ್ಲದೆ
ನೀ ಬರುವೆ ಎಂದು ಕಾದು
ನಾ ಕುಳಿತ ಕಲ್ಲೇ ಕರಗಿದೆ
ಕೊನೆವರೆಗೂ ಕಾಯುವೆ ನಿನ್ನ
ಬಂದು ಸೇರಿಬಿಡು ನನ್ನ..

ಮುಂಜಾನೆ ನಿನ್ನ ಎಬ್ಬಿಸಿ
ಬಿಡದ ಕಣ್ಣುಗಳ ತೆರೆಸಿ
ಇಂಪಾದ ಗಾಳಿಯ ಬೀಸಿ
ಮತ್ತೆ ಮಲಗಿಸುವೆ
ಮುದ್ದಾದ ನಿನ್ನ ಮೊಗವ
ನೋಡಿ ಒಮ್ಮೆ ...

ಹಿಂದೆಂದು  ನೋಡದ  ಸೊಗಸೆ
ನನ್ನ ಬಾಳಲಿ ಬಂದು ನೆಲಸೆ
ಕಾಯುತಲಿರುವ ನನ್ನ ಮನ
ಕಲ್ಲಾಗದಿರಲೆಂದು ಬೇಡುವೆ ನ
ಎಲ್ಲಿರುವೆ ನನ್ನೊಲವೆ ಬಳಿಗೆ ಬಾ
ನಾ ಬರೆದ ಕವಿತೆಯ ಓದಲು
ಬೇಗ ಬಾ ...